rhymes ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
rhymes ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಡಿಸೆಂಬರ್ 13, 2008

ತೋರಣ

ಹಸಿರು ತಳಿರು ತೋರಣ
ಸಿಹಿ ಹೋಳಿಗೆ ಹೂರಣ
ದಿನವು ಬರಲಿ
ಮಜದ ಹಬ್ಬ
ಶಾಲೆರಜೆಗೆ ಕಾರಣ

ಬುಧವಾರ, ಡಿಸೆಂಬರ್ 10, 2008

ಪುಟ್ಟ ಹೆಜ್ಜೆ

ಪುಟ್ಟ ಪುಟ್ಟ ಹೆಜ್ಜೆ
ತುಂಟ ಕಾಲ್ಗೆ ಗೆಜ್ಜೆ
ಗಲ್ಲ ಸವರಿ
ಮುತ್ತ ನೀಡೆ
ಮುಖದಿ ಕೆಂಪು ಲಜ್ಜೆ.

ಗುರುವಾರ, ಜೂನ್ 12, 2008

ಪಗಡೆಯ ಆಟ

ಪಗಡೆಯ ಆಟ ಬಲು ಚೆನ್ನ

ಓಟದ ಆಟವು ಇದು ಅಣ್ಣ

ನಾಕು ಜನ ಎದುರು ಬದರು

ಮಧ್ಯೆ ಹಾಸನಿಟ್ಟು ಒದರು

ಕಾಯಿ ಕೆಂಪು ಕಪ್ಪು ನಾಕು

ಹಳದಿ ಹಸುರು ನಾಕು ನಾಕು

ಎರಡು ದಾಳ ಕರಗಳಲಿ

ಉಜ್ಜಿ ಬಿಡು ಕೆಳಗುರುಳಲಿ

ದುಗ ಇತ್ತಿಗ ಎಂಟು ಹನ್ನೆರಡು

ನಡೆಸು ಜೊತೆಯ ಕಾಯಿ ಎರಡು

ಕಾದು ಕುಳಿತು ಕಾಯಿ ಹೊಡಿ

ಜೋಡಿಯಿಂದ ಜೋಡಿ ಬಡಿ

ಹೊಡೆದ ಕಾಯ್ ಹೊರಗಟ್ಟಿಸು

ಮರಳಿ ಅದನು ಹುಟ್ಟಿಸು

ಒಂದು ಪೂರಾ ಸುತ್ತು ಹಾಕು

ಹೊಟ್ಟೆ ತಲುಪಿ ಮಲಗು ಸಾಕು

ಎಲ್ಲ ಕಾಯ ಹಣ್ಣು ಮಾಡು

ಇಷ್ಟವಾಗೆ ಮತ್ತೆ ಆಡು

ಸೋಮವಾರ, ಏಪ್ರಿಲ್ 14, 2008

ಬೇಸಿಗೆಯ ಮಜಾ

ಇದೋ ಬಂತು ಬೇಸಿಗೆ
ರಜವಾಯಿತು ಶಾಲೆಗೆ
ಸಖತ್ ಮಜಾ ನನಗೆ
ಹೊರಟೆ ಅಜ್ಜಿ ಮನೆಗೆ
ಸಿಕ್ಕಿತು ಕವಡೆ, ಅಳಿಗುಳಿ ಆಟಿಗೆ
ಸೀಟಿದೆ ಪತ್ತಾ, ಕರುಗಳ ಬಗೆಬಗೆ
ಖಾಲಿಮನೆ ಪಿಗ್ಗಿಗಳು ಅಜ್ಜಿಗೆ
ನಕ್ಕಿದೆ ಮರಳಿ ಆಕೆಯ ಮಡಿಲಿಗೆ





ಶ್ರೀ ಜಿ.ಎಲ್.ಎನ್. ಸಿಂಹ ಅವರ ಈ ಚಿತ್ರವನ್ನು ನೋಡಿ ಈ ಕವಿತೆಯನ್ನು ಬರೆದೆ.