ಗುರುವಾರ, ಜೂನ್ 12, 2008

ಪಗಡೆಯ ಆಟ

ಪಗಡೆಯ ಆಟ ಬಲು ಚೆನ್ನ

ಓಟದ ಆಟವು ಇದು ಅಣ್ಣ

ನಾಕು ಜನ ಎದುರು ಬದರು

ಮಧ್ಯೆ ಹಾಸನಿಟ್ಟು ಒದರು

ಕಾಯಿ ಕೆಂಪು ಕಪ್ಪು ನಾಕು

ಹಳದಿ ಹಸುರು ನಾಕು ನಾಕು

ಎರಡು ದಾಳ ಕರಗಳಲಿ

ಉಜ್ಜಿ ಬಿಡು ಕೆಳಗುರುಳಲಿ

ದುಗ ಇತ್ತಿಗ ಎಂಟು ಹನ್ನೆರಡು

ನಡೆಸು ಜೊತೆಯ ಕಾಯಿ ಎರಡು

ಕಾದು ಕುಳಿತು ಕಾಯಿ ಹೊಡಿ

ಜೋಡಿಯಿಂದ ಜೋಡಿ ಬಡಿ

ಹೊಡೆದ ಕಾಯ್ ಹೊರಗಟ್ಟಿಸು

ಮರಳಿ ಅದನು ಹುಟ್ಟಿಸು

ಒಂದು ಪೂರಾ ಸುತ್ತು ಹಾಕು

ಹೊಟ್ಟೆ ತಲುಪಿ ಮಲಗು ಸಾಕು

ಎಲ್ಲ ಕಾಯ ಹಣ್ಣು ಮಾಡು

ಇಷ್ಟವಾಗೆ ಮತ್ತೆ ಆಡು