ಎನ್ನ ತೋಳ ತೊಟ್ಟಿಲಿನಲಿ ಕಂದ
ಹೂದುಟಿಯಲಿ ಅಡಗಿದ ಕೋಟಿ ನಗು
ನಕ್ಕು ನಲಿದು ದಣಿದು ನಿದ್ರಿಸುತಿರೆ
ಮನ ಮಮತೆಯ ಕಡಲು - ಪೆದ್ದುಗುಂಡ
ಭಾನುವಾರ, ಸೆಪ್ಟೆಂಬರ್ 12, 2010
ಬುಧವಾರ, ಜನವರಿ 20, 2010
ಪೆದ್ದುಗುಂಡನ ರಗಳೆ - ೨೭
ಬಡಪಾಯಿ ಆಟವು ಎಸಗಿದ ತಪ್ಪೇನು ?
ತಪ್ಪು ಅದ ಜೂಜಾಗಿಸಿದ ಪುಂಡರದು.
ಜಗಳ, ಓಟಗಳೋ, ಕ್ರಿಕೆಟ್ಟಿನಾಟಗಳೋ,
ಗೆಲು-ಸೋಲ್ಗಳ ದ್ವೈತವೇ ದ್ಯೂತ - ಪೆದ್ದುಗುಂಡ
ಪೆದ್ದುಗುಂಡನ ರಗಳೆ - ೨೬
ಉಡುವಾಸೆ ತೊಡುವಾಸೆ ಮುಡಿವಾಸೆ
ಮೂಸುವಾಸೆ ಉಣುವಾಸೆ ಕುಡಿವಾಸೆ
ಕೇಳುವಾಸೆ ಕಾಣುವಾಸೆ ಮುದ್ದಿಸುವಾಸೆ
ಆಸೆ ಅತಳ ಭಾಂಡ - ಪೆದ್ದುಗುಂಡ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)