ಶುಕ್ರವಾರ, ಜನವರಿ 9, 2009

ಪೆದ್ದುಗುಂಡನ ರಗಳೆ - ೧೭

ಸಂಸಾರ ಹಾಸಂಗಿ, ನೀ ಒಂದು ಕಾಯಿ
ವಿಧಿ ಬಿಟ್ಟ ದಾಳದಂತೆ ನಿನ್ನ ನಡೆ
ಹಾವ್ದೋರೆ ಹಿನ್ನಡೆ; ಏರು, ಏಣಿ ಬರಲು
ಜೀವನ ಪರಮಪದದಾಟ - ಪೆದ್ದುಗುಂಡ
-----------------------------------
ಹಾಸಂಗಿ = ಆಟದ ಹಾಸು
ಹಾವ್ದೋರೆ = ಹಾವು + ತೋರೆ = ಹಾವು ಎದುರಾದರೆ
ಪರಮಪದದಾಟ = ಪರಮಪದದ + ಆಟ = ಹಾವು ಏಣಿ ಆಟ

2 ಕಾಮೆಂಟ್‌ಗಳು:

ಚಂದ್ರಕಾಂತ ಎಸ್ ಹೇಳಿದರು...

ಈ ಪದ ಇಷ್ಟವಾಯಿತು. ಒಂದೇ ಒಂದು ತಿದ್ದುಪಡಿ ಮಾಡಬಹುದೆನಿಸುತ್ತೆ. ‘ಹಾವ್ಥೋರೆ’ಯನ್ನು ‘ಹಾವ್ತೋರೆ’ಮಾಡಿದರೆ ಸರಿಯಾಗಬಹುದಲ್ಲವೇ? ಬಹುಶಃ ಕೈತಪ್ಪಿನಿಂದ ಹಾಗಾಗಿರಬಹುದು.

H.S. Dharmendra ಹೇಳಿದರು...

ಚಂದ್ರಕಾಂತ ಅವರೇ, ಹಾವು + ತೋರೆ = ಹಾವ್ತೋರೆ ಆಗೋದಕ್ಕಿಂತ ಹಾವ್ದೋರೆ ಆಗುತ್ತದಲ್ಲವೇ?