ಶುಕ್ರವಾರ, ನವೆಂಬರ್ 7, 2008

ಪೆದ್ದುಗುಂಡನ ರಗಳೆ - ೪

ಹೂಂಕರಿಸಿ ಘೀಳಿಟ್ಟು ತಮಸ ಹೊರಗಟ್ಟು
ಹಣತೆ ಹೊನ್ನ ಬೆಳಗಿಸಿ ಸತ್ತ್ವ ಬರಮಾಡು
ದೀಪದ ಬೆಳಕಲ್ಲಿ ಮಿಂದ ಮನೆಯೊಳಗೆ
ಸಿರಿದೇವಿ ಬರುವಳು - ಪೆದ್ದುಗುಂಡ

2 ಕಾಮೆಂಟ್‌ಗಳು:

ಅಸತ್ಯ ಅನ್ವೇಷಿ ಹೇಳಿದರು...

ರಘು ಅವರೆ,

ಪೆದ್ದುಗುಂಡನ ಬಾಯಲ್ಲೂ ಇಂಥ ವೇದವಾಕ್ಯಗಳನ್ನು ಕೇಳಿ ಸಂತೋಷವಾಗಿದೆ. ಪೆದ್ದುಗುಂಡನದೂ ರಗಳೆಯೇ ಆದರೂ, ನಮ್ಮ ಬೊಗಳೆಯ ರಗಳೆಗಿಂತಲೂ ಮಿಗಿಲಾದ, ಅದಕ್ಕೆ ನಿಲುಕಲಾರದ ರಗಳೆ ಎಂಬುದಂತೂ ಸಾಬೀತಾಗಿದೆ.

Raghu ಹೇಳಿದರು...

ಶ್ರೀಯುತರೆ
ನೀವು ಇಲ್ಲಿ ಬಂದು ನನ್ನ ಕವನಗಳನ್ನು ಓದಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದೀರಿ. ನಿಮ್ಮ ಹುರಿದುಂಬಿಕೆಯ ಮಾತುಗಳಿಗಾಗಿ ನನ್ನ ಧನ್ಯವಾದಗಳು.